ಬೆಂಗಳೂರು: ನುಡಿದಂತೆ ನಡೆದಿದ್ದೇವೆ ಎಂಬ ಘೋಷಣೆಯೊಂದಿಗೆ ಸರ್ಕಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಈಗ ಇಮೇಜ್ ಗೆ ಧಕ್ಕೆ ಬರುತ್ತಿರುವ ಚಿಂತೆ ಶುರುವಾಗಿದೆ.ಇತ್ತೀಚೆಗೆ ಗುತ್ತಿಗೆದಾರರ ಮೇಲಿನ ಐಟಿ ದಾಳಿಯಲ್ಲಿ ಸಿಕ್ಕ ಕಂತೆ ಕಂತೆ ಹಣಕ್ಕೆ ಕಾಂಗ್ರೆಸ್ ಲಿಂಕ್ ಇದೆ ಎಂಬ ಆರೋಪ ಕೇಳಿಬಂದಿತ್ತು. ಅದರ ಬೆನ್ನಲ್ಲೇ ವರ್ಗಾವಣೆ ದಂದೆ ಆರೋಪ, ಶಾಸಕರಿಗೆ ಅನುದಾನ ಸಿಗುತ್ತಿಲ್ಲವೆಂಬ ಆರೋಪಗಳಿಂದಾಗಿ ಕಾಂಗ್ರೆಸ್ ಗೆ ಮುಖಭಂಗವಾಗಿದೆ.ಹೀಗಾಗಿ ಈಗ ಮುಂದಿನ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ