ಬೆಂಗಳೂರು: 2017 ಕರ್ನಾಟಕದ ಪಾಲಿಗೆ ಬೇಡದ ಕಾರಣಗಳಿಗೆ ಸುದ್ದಿಯಾದ ವರ್ಷ. ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಗಳು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಇತ್ಯಾದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಘಟನೆಗಳು. ಹಾಗೆ ನೋಡಿದರೆ ಈ ವರ್ಷ ಮಂಗಳೂರು, ಕರಾವಳಿ ಭಾಗದಲ್ಲಿ ಹೆಚ್ಚು ಕೋಮು ಗಲಭೆಗಳಾದವು. ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಮಂಗಳೂರು, ಬಂಟ್ವಾಳದಲ್ಲಿ ದೊಡ್ಡ ಮಟ್ಟಿನ ಪ್ರತಿಭಟನೆಗಳಾದವು. ಇತ್ತೀಚೆಗೆ ಪರೇಶ್ ಮೇಸ್ತ ಸಾವಿಗೀಡಾದಾಗ ಉತ್ತರ