ಬೆಂಗಳೂರು: ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಹಿರಂಗ ಪ್ರಚಾರದ ಅವಧಿ ನಿನ್ನೆಗೆ ಕೊನೆಯಾಗಿದ್ದು, ಇಂದಿನಿಂದ ರಾಜಕೀಯ ನಾಯಕರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.ಚುನಾವಣೆಗೆ ಇನ್ನು ಎರಡು ದಿನ ಬಾಕಿಯಿದ್ದು, ಹೀಗಾಗಿ ಬಹಿರಂಗ ಪ್ರಚಾರದ ಅವಧಿ ಕೊನೆಯಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ರಾಜಕೀಯ ನಾಯಕರು ಯಾವುದೇ ಬಹಿರಂಗ ಸಮಾವೇಶ ನಡೆಸುವಂತಿಲ್ಲ.ಅಷ್ಟೇ ಅಲ್ಲ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಂದಿನಿಂದ ಚುನಾವಣೆ ಮುಗಿಯುವವರೆಗೆ ಮಧ್ಯ ಮಾರಾಟ ನಿಷೇಧಿಸಲಾಗಿದೆ.