ರಾಜ್ಯದಲ್ಲಿ ಗುಡ್ಡ ಬೆಟ್ಟ ಕಾಡು ಪ್ರದೇಶ ಹೆಚ್ಚಾಗಿದೆ. ಕಪಲ್ಸ್ (ಜೋಡಿಗಳು) ಇಂತಹ ನಿರ್ಜನ ಪ್ರದೇಶ ಪ್ರದೇಶಕ್ಕೆ ಹೋಗಬಾರದು ಎಂದು ಹೇಳುವ ಮೂಲಕ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಮೈಸೂರಿನಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ವಿಚಾರವಾಗಿ ಇಂದು ಖನಿಜ ಭವನದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ಇಂತಹ ನೀಚ ಕೃತ್ಯಗಳನ್ನು ಯಾರೇ ಎಷ್ಟೇ