ಕರ್ನಾಟಕ ಸರ್ಕಾರದ ಕಾವೇರಿ ತಂತ್ರಾಂಶವನ್ನು ಹ್ಯಾಕ್ ಮಾಡಿ ಹಲವರ ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ 3 ಜನ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದೀಪಕ್ ಕುಮಾರ್ ಹೆಂಬ್ರಮ್ (33), ವಿವೇಕ್ ಕುಮಾರ್ ಬಿಸ್ವಾಸ್ (24) ಹಾಗೂ ಮದನ್ ಕಮಾ (23) ಬಂಧಿತ ಆರೋಪಿಗಳಾಗಿದ್ದು,ಕಾವೇರಿ ತಂತ್ರಾಂಶ ಹ್ಯಾಕ್ ಮಾಡಿದ್ದ ಆರೋಪಿಗಳು ಸಾರ್ವಜನಿಕರ ಆಸ್ತಿ ದಾಖಲೆ, ಬೆರಳಚ್ಚು, ಆಧಾರ್ ಹಾಗೂ ಬ್ಯಾಂಕ್ ಮಾಹಿತಿಯನ್ನು ಕದ್ದು ವಂಚನೆ ನಡೆಸಿದ್ದರು.