ಬೆಂಗಳೂರು : ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೈ ಮುಖಂಡ ಕೆ.ಬಿ.ಚಂದ್ರಶೇಖರ್ ಕಿಡಿಕಾರಿದ್ದಾರೆ. ಈ ಹಿಂದೆ ನಮ್ಮ ತಾಲೂಕಿನಲ್ಲೂ ಗ್ರಾಮವಾಸ್ತವ್ಯ ಮಾಡಿದ್ದರು, ಹೆಚ್.ಡಿ.ಕೆ. ವಾಸ್ತವ್ಯ ಮಾಡಿದ್ದ ಗ್ರಾಮಗಳ ಪರಿಸ್ಥಿತಿ ಏನಾಗಿದೆ? ಆದ್ದರಿಂದ ಕೆಲಸಕ್ಕೆ ಬಾರದ ಗ್ರಾಮವಾಸ್ತವ್ಯವನ್ನು ಬಿಟ್ಟು ಕೆಲಸ ಮಾಡಲಿ ಎಂದು ಸಿಎಂಗೆ ಕೆ.ಬಿ.ಚಂದ್ರಶೇಖರ್ ಸಲಹೆ ನೀಡಿದ್ದಾರೆ. ಗ್ರಾಮವಾಸ್ತವ್ಯದ ವೇಳೆ ಆ ಭಾಗದ ಜೆಡಿಎಸ್ ಮುಖಂಡರು ತುಂಬಿಕೊಳ್ತಾರಷ್ಟೇ. ಇದರಿಂದ ಮೂರು ಕಾಸಿನ ಪ್ರಯೊಜನವಾಗಲ್ಲ ಎಂದು ವಾಗ್ದಾಳಿ ನಡೆಸಿದ