ಬೆಂಗಳೂರು: ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ರನ್ನು ಹೈಕಮಾಂಡ್ ಕರ್ನಾಟಕ ಜವಾಬ್ಧಾರಿಯಿಂದ ಮುಕ್ತಗೊಳಿಸಿ ತವರಿಗೆ ಕಳುಹಿಸಲಿದೆಯೇ?ಹೀಗೊಂದು ಸುದ್ದಿ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ರಾಜ್ಯದಲ್ಲಿ ಬಲವರ್ಧನೆಗೆ ಯೋಜನೆ ರೂಪಿಸುತ್ತಿದೆ. ಇದೇ ಕಾರಣಕ್ಕೆ ಹೈಕಮಾಂಡ್ ಈ ಮಹತ್ತರ ಬದಲಾವಣೆ ಮಾಡಲಿದೆ ಎನ್ನಲಾಗಿದೆ.ಕೆಸಿ ವೇಣುಗೋಪಾಲ್ ರನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮರಳಿ ಅವರ ತವರು ಕೇರಳಕ್ಕೆ ಕಳುಹಿಸಲಿದೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಹಿರಿಯ