ರೇಪ್ ಮಾಡಲು ಬಂದವನ ಗುಪ್ತಾಂಗ ಕತ್ತರಿಸಿದ ಯುವತಿ

ತಿರುವನಂತಪುರಂ| Rajesh patil| Last Modified ಶನಿವಾರ, 20 ಮೇ 2017 (12:24 IST)
ಕಳೆದ ಐದು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ 54 ವರ್ಷದ ಸ್ವಯಂಘೋಷಿತ ಸ್ವಾಮಿಯ ಕತ್ತರಿಸಿ 23 ವರ್ಷದ ಯುವತಿ ಸೇಡು ತೀರಿಸಿಕೊಂಡಿದ್ದಾಳೆ.
ಕೇರಳದ ಕೊಲ್ಲಂನ ಪನ್ಮಾನಾ ಆಶ್ರಮದ ಸದಸ್ಯನಾಗಿರುವ ಸ್ವಾಮಿ ಗಣೇಶಾನಂದ ಅಲಿಯಾಸ್ ಹರಿ ಓಂ ನನ್ನುಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಗುಪ್ತಾಂಗವನ್ನು ಶೇ.90 ರಷ್ಟು ಕತ್ತರಿಸಿಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.


ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರ ತಂಡ ಪ್ಲ್ಯಾಸ್ಟಿಕ್ ಸರ್ಜರಿ ಮಾಡಿದ್ದು ಸ್ವಾಮಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.


ಕಾನೂನು ವಿದ್ಯಾರ್ಥಿ ಪ್ರಕಾರ, ಆರೋಪಿ ಸ್ವಾಮಿ ಗಣೇಶಾನಂದ ಆಗಾಗ್ಗೆ ಧಾರ್ಮಿಕ ಸಮಾರಂಭಗಳನ್ನು ನಡೆಸಲು ಯುವತಿಯ ಮನೆಗೆ ಭೇಟಿ ನೀಡುತ್ತಿದ್ದರು. ನಿನ್ನೆ ರಾತ್ರಿ ಕೂಡಾ ಯುವತಿಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ ಕೋಪಗೊಂಡ ಯುವತಿ ಆತನ ಗುಪ್ತಾಂಗಕ್ಕೆ ಕತ್ತರಿಹಾಕಿದ್ದಾಳೆ
ಆರೋಪಿ ಸ್ವಾಮಿಯ ವಿರುದ್ಧ, ಅತ್ಯಾಚಾರ , ಪೋಸ್ಕೋ ಕಾಯ್ದೆಯಡಿ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ. ಯುವತಿಯ ಮೇಲೆ ಯಾವುದೇ ಕೇಸ್ ದಾಖಲಿಸಿಲ್ಲ. ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :