ಯಶ್ ನಟನೆಯ ‘ಕೆಜಿಎಫ್ 2’ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಸದ್ಯ ಚಿತ್ರತಂಡ ದೇಶಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರವು ಈಗಲೇ ದಾಖಲೆಗಳನ್ನು ಬರೆಯುತ್ತಿದೆ. ಯುರೋಪ್, ಅಮೇರಿಕಾ, ರಷ್ಯಾ ಸೇರಿದಂತೆ ವಿಶ್ವದ ಹಲವು ಪ್ರದೇಶಗಳಲ್ಲಿ ‘ಕೆಜಿಎಫ್ 2’ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ವಿಶೇಷವೆಂದರೆ ಎಲ್ಲೆಡೆ ಕನ್ನಡ ಸೇರಿದಂತೆ ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲೂ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ಇದೀಗ ಗ್ರೀಸ್ನಲ್ಲಿ ರಿಲೀಸ್ ಆಗಲಿರುವ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಖ್ಯಾತಿಯನ್ನು ಕೆಜಿಎಫ್ ಬರೆಯಲಿದೆ.