ಬೆಂಗಳೂರು: ಉಪಚುನಾವಣೆ ಗೆಲುವಿನ ಸಂಭ್ರಮದಲ್ಲಿರುವ ರಾಜ್ಯ ಕಾಂಗ್ರೆಸ್ ಗೆ ನೂತನ ಸಾರಥಿ ಯಾರು ಎಂದು ಇಂದು ಗೊತ್ತಾಗಲಿದೆ. ಹೈಕಮಾಂಡ್ ಜತೆ ಇಂದು ಸಭೆ ನಡೆಯಲಿದ್ದು, ಹೊಸ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಾಗಲಿದೆ. ಗೃಹಸಚಿವ ಹಾಗೂ ಹಾಲಿ ಅಧ್ಯಕ್ಷ ಪರಮೇಶ್ವರ್ ಸ್ಥಾನಕ್ಕೆ ಹೊಸಬರು ಬರಲಿದ್ದಾರೆ. ಈ ಪೈಕಿ ಡಿಕೆ ಶಿವಕುಮಾರ್ ಅಧ್ಯಕ್ಷನಾಗಲು ಒಲ್ಲೆನೆಂದಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಟ್ಟುಕೊಂಡು ಪ್ರಬಲ ನಾಯಕನ ಹುಡುಕಾಟ ನಡೆದಿದೆ. ಮೂಲಗಳ ಪ್ರಕಾರ ಮಾಜಿ ಕೇಂದ್ರ ಸಚಿವ