ಪ್ರತಿಭಟನೆ ನಿರತ ವೈದ್ಯರಿಗೆ ಆರೋಗ್ಯ ಸಚಿವರಿಂದ ಖಡಕ್ ಸೂಚನೆ

ಬೆಂಗಳೂರು, ಶುಕ್ರವಾರ, 8 ನವೆಂಬರ್ 2019 (09:06 IST)

ಬೆಂಗಳೂರು : ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಇಂದು ಸರ್ಕಾರಿ ಹಾಗೂ ಖಾಸಗಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಇವರಿಗೆ ಆರೋಗ್ಯ ಸಚಿವ ಶ್ರೀರಾಮುಲು ಖಡಕ್ ಸೂಚನೆಯೊಂದನ್ನು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ವೈದ್ಯರಿಗೆ ಅಗತ್ಯ ಭದ್ರತೆ ಒದಗಿಸುವಂತೆ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದಾರೆ.


ಹಾಗೇ  ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು ಬಂದ್ ಮಾಡದೆ ಕೆಲಸ ಮಾಡಲು ವೈದ್ಯರಿಗೆ ಮನವಿ ಮಾಡುತ್ತೇನೆ. ವೈದ್ಯರು ಅಗತ್ಯ ಸೇವೆಗಳ ವ್ಯಾಪ್ತಿಯಲ್ಲಿ ಬರುವುದರಿಂದ ಒಂದು ವೇಳೆ ಅವರು ಮುಷ್ಕರ ಮುಂದುವರಿಸಿದರೆ ಎಸ್ಮಾ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಿಳೆ ಶವ ಹೊರತೆಗೆದು ಆ ಕೆಲಸ ಮಾಡಿದ ಪಾಕಿಗಳು

ಪಾಪಿ ಪಾಕಿಸ್ತಾನದಲ್ಲಿ ಮತ್ತೊಂದು ಅಮಾನವೀಯ ಹಾಗೂ ವಿಕೃತ ಘಟನೆ ನಡೆದಿದೆ.

news

ಪೆಟ್ರೋಲ್ ಸುರಿದು ಕೊಂದದ್ದು ಯಾರನ್ನು?

ಆ ವ್ಯಕ್ತಿಯ ದೇಹಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಇಡಲಾಗಿತ್ತು. ಹೊತ್ತಿ ಉರಿಯುತ್ತಿದ್ದ ದೇಹವನ್ನು ನೋಡಿದ ...

news

ಸಣ್ಣ ಊರಲ್ಲಿ 10 ಕ್ಕೂ ಹೆಚ್ಚು ಡೆಂಗ್ಯು ಕೇಸ್ : ಆರೋಗ್ಯ ಇಲಾಖೆ ಅಧಿಕಾರಿಗಳೇ ಮಾಯ

ಒಂದೇ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಡೆಂಗ್ಯು ಆಗಿದೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನೇ ಆ ...

news

ಅನರ್ಹ ಶಾಸಕನಿಂದ ಜೋರಾದ ಟೆಂಪಲ್ ರನ್

ಉಪಚುನಾವಣೆಗೆ ದಿನಗಣನೆ ಶುರುವಾಗಿರೋವಾಗಲೇ ಅನರ್ಹ ಶಾಸಕರು ಹಾಗೂ ಅವರ ಕುಟುಂಬದವರು ಟೆಂಪಲ್ ರನ್ ...