ಬೆಂಗಳೂರು : ದೋಸ್ತಿ ಸರ್ಕಾರಕ್ಕೆ ಮಾಜಿ ಪ್ರಧಾನಿ, ಜೇಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ರಾಷ್ಟ್ರೀಯ ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಧರ್ಮ ಉಲ್ಲಂಘಿಸಿದ್ರೆ ಸರ್ಕಾರಕ್ಕೆ ಅಪಾಯ. ಮೈತ್ರಿ ಧರ್ಮ ಉಲ್ಲಂಘನೆ ಮಾಡಿದರೆ ಸರ್ಕಾರದ ಪತನ ಕ್ಕೆ ನಾಂದಿ ಹಾಡಿದ್ದಂತೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ.ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರ ಇಡಬೇಕು. ಅದಕ್ಕಾಗಿ ಮೈತ್ರಿ ಸರ್ಕಾರ ಸುಗಮ ಕಾರ್ಯ