ಪೊಲೀಸರು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಇಬ್ಬರು ಖತರ್ನಾಕ ಕಳ್ಳರನ್ನು ಬಂಧಿಸಲಾಗಿದೆ.ಕಲಬುರಗಿ ನಗರದ ಯಾದುಲ್ಲಾ ಕಾಲೋನಿಯ ಮಿರ್ಜಾ ಜಮೀರ್ ಬೇಗ್ ತಂದೆ ಮಿರ್ಜಾ ಅಲಿ ಬೇಗ್ ಮತ್ತು ಮಿಜುಗುರಿ ಬಡಾವಣೆಯ ಮೋಸಿನ್ ಅಹ್ಮದ್ ತಂದೆ ಸಲಿಮೋದ್ದೀನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.ಈಚೆಗೆ ಇವರಿಬ್ಬರು ಎಂ.ಎಸ್.ಕೆ.ಮಿಲ್ ನಿವಾಸಿ ಸಮೀರ್ ಮೂಸಾ ಕುಡಚಿ ಎಂಬುವವರಿಗೆ ಬೈಕ್ ಕೊಡಿಸುವುದಾಗಿ ಅವರ ಬಳಿ 5,100 ರೂಪಾಯಿ ತೆಗೆದುಕೊಂಡು ವಂಚನೆ ಮಾಡಿದ್ದರು. ಸಮೀರ್ ಮೂಸಾ ಕುಡಚಿ ಈ ಸಂಬಂಧಿ