ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಇಂದು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ರು. ಇನ್ ಫ್ಯಾಂಟ್ರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರದ ಎಲ್ಲ ವಿಭಾಗದ ಡಿಸಿಪಿಗಳನ್ನು ಒಳಗೊಂಡಂತೆ ಸಭೆ ನಡೆಸಲಾಯ್ತು. ಸಭೆಯಲ್ಲಿ ಸಿಟಿ ಕಮಿಷನರ್ ದಯಾನಂದ್, ಅಡಿಷನಲ್ ಕಮಿಷನರ್ ಗಳಾದ ಸತೀಶ್ ಕುಮಾರ್ರ, ರಮಣ್ಗುಪ್ತಾ, ಸಿಸಿಬಿ ಜಾಯಿಂಟ್ ಕಮಿಷನರ್ ಡಾ.ಎಸ್.ಡಿ. ಶರಣಪ್ಪ, ಟ್ರಾಫಿಕ್ಕಮಿಷನರ್ ಎಂ.ಎನ್. ಅನುಚೇತ್ ಸೇರಿ ನಗರದ ಎಲ್ಲಾ ವಿಭಾಗದ ಡಿಸಿಪಿಗಳು ಭಾಗಿಯಾಗಿದ್ರು. ಕಳೆದ ಜೂನ್ 25 ರಂದು ಮೊದಲ ಬಾರಿಗೆ ಬೆಂಗಳೂರು ಸಿಟಿ ಹೈಯರ್ ಪೊಲೀಸ್ ಆಫೀಸರ್ಸ್ ಜೊತೆ ಮೀಟಿಂಗ್ ಮಾಡಿದ್ದ ಡಿಜಿ ಅಲೋಕ್ ಮೋಹನ್ ಇಂದು ಎರಡನೇ ಬಾರಿಗೆ ಸಭೆ ನಡೆಸಿ ಕೆಲಮಹತ್ವದ ಸೂಚನೆಗಳನ್ನ ನೀಡಿದ್ರು.