ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಉಪಟಳ ಮುಂದುವರೆದಿದ್ದು, ಇಲ್ಲಿನ ಹಿಂದೂ ದೇಗುಲವೊಂದರ ಮೇಲೆ ದೇಶ ವಿರೋಧಿ ಮತ್ತು ಮೋದಿ ದ್ವೇಷದ ಹೇಳಿಕೆಗಳನ್ನು ಬರೆಯಲಾಗಿದೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿರುವ ಶ್ರೀ ಮಾತಾ ಭಾಮೇಶ್ವರಿ ದುರ್ಗಾ ದೇವಿ ದೇಗುಲವನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದಾರೆ. ದೇಗುಲದ ಗೋಡೆ ಮೇಲೆ ಕಪ್ಪು ಬಣ್ಣದ ಸ್ಪ್ರೇ ಇಂದ ಮೋದಿ ಓರ್ವ ಭಯೋತ್ಪಾದಕ, ಪಂಜಾಬ್ ಭಾರತದ ಭಾಗವಲ್ಲ ಎಂದು ಬರೆದಿದ್ದಾರೆ. ಕಳೆದ ತಿಂಗಳು, ಆಗಸ್ಟ್ನಲ್ಲಿ, ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ದೇವಾಲಯವನ್ನು