ಕಾಮಗಾರಿಗೆ ಬ್ರೇಕ್ ಹಾಕಿದ ಸರಕಾರ : ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಖರ್ಗೆ

ಕಲಬುರಗಿ| Jagadeesh| Last Modified ಮಂಗಳವಾರ, 22 ಅಕ್ಟೋಬರ್ 2019 (18:30 IST)
ಸಿಎಂ ವಿರುದ್ಧ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಸರಕಾರ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದು, ಶಾಸಕರ ಅನುದಾನ ಹಂಚಿಕೆಯಲ್ಲಿ ಸರಕಾರ ತಾರತಮ್ಯ ಮಾಡುತ್ತಿದೆ ಅಂದಿದ್ದಾರೆ.

ಮಾಡೋದಿಲ್ಲ ಎನ್ನುತ್ತಲೇ ಯಡಿಯೂರಪ್ಪ ದ್ವೇಷವನ್ನೇ ಮುಂದುವರಿಸಿದ್ದಾರೆ.

ರಾಜ್ಯದಲ್ಲಿರೋ ಸರಕಾರದಿಂದ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯ ಸರಕಾರ ಸುಭದ್ರವಾಗಿಲ್ಲ ಅಂತ ಟೀಕೆ ಮಾಡಿದ್ದಾರೆ.
400 ಕೋಟಿ ಯಷ್ಟು ಕಲಬುರಗಿಯಲ್ಲಿ ನಡೆಯುತ್ತಿರೋ ಕಾಮಗಾರಿಗಳಿಗೆ ಸರಕಾರ ತಡೆಹಿಡಿದಿರೋದಕ್ಕೆ ಖರ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ರು.


ಇದರಲ್ಲಿ ಇನ್ನಷ್ಟು ಓದಿ :