ನಟ ಅಂಬರೀಶ್ ನಿಧನಕ್ಕೆ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿನಿಮಾ ಹಾಗೂ ರಾಜಕೀಯದಲ್ಲಿ ಲಾಭ ನಷ್ಟ ಲೆಕ್ಕಹಾಕದೇ ಅಂಬಿ ಮುಂದುವರಿದಿದ್ದರು. ಅಧಿಕಾರ ತ್ಯಾಗ ಮಾಡುವ ಧೈರ್ಯ ಅವರಲ್ಲಿತ್ತು ಎಂದು ಸ್ಮರಿಸಿದ್ದಾರೆ.ಕಲಬುರಗಿಯಲ್ಲಿ ಮಾತನಾಡಿದ ಖರ್ಗೆ, ಸ್ನೇಹಜೀವಿಯಾಗಿದ್ದ ಅಂಬರೀಶ್ ಬಹಳ ಉದಾರಿಯಾಗಿದ್ದರು. ಚಿತ್ರರಂಗ ಹಾಗೂ ರಾಜಕೀಯದಲ್ಲಿ ಎಲ್ಲರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು.ಕಾವೇರಿ ವಿಷಯದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಧಿಕಾರ ತ್ಯಾಗ ಮಾಡೋ ಧೈರ್ಯ ಅವರಲ್ಲಿತ್ತು.