ಓಎಲ್ಎಕ್ಸ್ ಮೂಲಕ ಸೈಟು ಕೊಂಡುಕೊಳ್ಳುತ್ತೇನೆ ಎಂದು ಹೇಳಿ ವಂಚಿಸುತ್ತಿದ್ದ ಖತರ್ನಾಕ್ ಆಸಾಮಿಯನ್ನು ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ವಿನೋದ್ ಕುಮಾರ್ ರೆಡ್ಡಿ ಬಂಧಿತ ಆರೋಪಿಯಾಗಿದ್ದಾನೆ. ಎರಡು ತಿಂಗಳ ಹಿಂದೆ ಓಎಲ್ಎಕ್ಸ್ ನಲ್ಲಿ ಪೀಣ್ಯ ನಿವಾಸಿಯೊಬ್ಬರು ತಮ್ಮ ಸೈಟ್ ಮಾರಾಟಕ್ಕಿದೆ ಎಂದು ಓಎಲ್ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ ಆರೋಪಿ ವಿನೋದ್ ಸೈಟ್ ಮಾರಾಟಕ್ಕಿಟ್ಟವರನ್ನು ಫೋನ್ ಮೂಲಕ ಸಂಪರ್ಕಿಸಿದ್ದ. ತದನಂತರ ನೇರವಾಗಿ ಮಾತನಾಡಬೇಕು ಎಂದು ಬೆಂಗಳೂರಿಗೆ