ಕಲಬುರ್ಗಿ: ಹಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿ, ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ವಿಷಯ ತಿಳಿದ ತಾಯಿಯೂ ಆಘಾತದಿಂದ ಮೃತಪಟ್ಟಿದ್ದಾರೆ. ಇಂತಹದ್ದೊಂದು ಮನಕಲಕುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಮೋನಪ್ಪ(42) ವ್ಯಕ್ತಿಯನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಮೋನಪ್ಪ ಕುಟುಂಬದವರು ಸಹ ಅಪಹರಣಕಾರರಿಗೆ 6 ಲಕ್ಷ ರೂ. ನೀಡಿದ್ದರು. ಆದರೂ ದುಷ್ಕರ್ಮಿಗಳು ಸೈಯದ್ ಚಿಂಚೋಳಿ-ನರೋಣ ನಡುವೆ ಮೊನಪ್ಪನನ್ನು ಹತ್ಯೆ ಮಾಡಿ, ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಗನ ಸಾವಿನ ವಿಷಯ ತಿಳಿದ ಲಲಿತಾ ಬಾಯಿ(70) ಆಘಾತಕ್ಕೊಳಗಾಗಿ ಹೃದಯಾಘಾತದಿಂದ