ಮೈಸೂರು : ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು. ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಿದ ವಿಲಕ್ಷಣ ಘಟನೆಯೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ.ಮೃತನನ್ನು ಸಯ್ಯದ್ ಮನ್ಸೂರ್ (32) ಎಂದು ಗುರುತಿಸಲಾಗಿದೆ. ಇವರು ಮೈಸೂರಿನ ಕಲ್ಯಾಣಗಿರಿ ನಿವಾಸಿ. ಭಾನುವಾರದಿಂದ ಮನ್ಸೂರ್ ನಾಪತ್ತೆಯಾಗಿದ್ದು, ಎನ್ ಆರ್ ಮೊಹಲ್ಲಾದ ಜಬೀ ಸೈಯದ್ ಝೈನುಲ್ಲಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಮನ್ಸೂರ್ ಕೊಲೆಯಾಗಿ ಮೃತದೇಹ ಪತ್ತೆಯಾಗಿದೆ.ಜಬೀ ಎಂಬಾತ ಹುಡುಗಿಯರನ್ನು ಚುಡಾಯಿಸುತ್ತಿದ್ದನು. ಇದನ್ನು ಗಮನಿಸಿದ್ದ ಮನ್ಸೂರ್, ಜಬೀಗೆ ಬುದ್ಧಿವಾದ ಹೇಳಿದ್ದಾರೆ.ಇದರಿಂದ