ಪ್ರತಿಷ್ಠಿತ ಉದ್ಯಮಿ, ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ಮಾಲೀಕ ಕೆ.ಪಿ. ನಂಜುಂಡಿ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ನಂಜುಂಡಿ ಅವರ ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ಮ್ಯಾನೇಜರ್ ಆಗಿರುವ ತಮ್ಮ ಪತಿ ವಿಜಯ್ ಕುಮಾರ್ ಅವರನ್ನು ಅಪಹರಿಸಿ ಅನ್ನ, ನೀರು ನೀಡದೆ ಮೈಸೂರಿನ ಮನೆಯೊಂದರಲ್ಲಿ ಮೂರು ದಿನ ಕೂಡಿ ಹಾಕಲಾಗಿತ್ತು. ಅವರ ಮೊಬೈಲ್ನ್ನು ಸಹ ಕಸಿದುಕೊಳ್ಳಲಾಗಿತ್ತು. ಮೈಸೂರು ಪೊಲೀಸರು ನನ್ನ ಪತಿಯನ್ನು ರಕ್ಷಿಸಿದ್ದಾರೆ, ಎಂದು ಬುಧವಾರ ವಿಜಯ್ ಕುಮಾರ್ ಪತ್ನಿ ಅಲಮೇಲು ವಿಜಯನಗರ