ಬೆಂಗಳೂರು : ಹೆಂಡತಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಪತ್ನಿಯನ್ನು ಕೊಂದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಆಯೇಷಾ(45) ಮೃತ ಮಹಿಳೆ. ಹೆಂಡತಿಯನ್ನು ಕೊಲೆ ಮಾಡಿದ್ದ ಪತಿ ನಿಸಾರ್(50) ಆಂಧ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನಿಸಾರ್ ಮತ್ತು ಆಯೇಷಾ ದಂಪತಿ ಬೆಂಗಳೂರಿನ ರಾಜೇಂದ್ರನಗರದಲ್ಲಿ ವಾಸವಿದ್ದರು. ವಯಸ್ಸು ಐವತ್ತಾದರು ನಿಸಾರ್ ಪತ್ನಿ ಶೀಲ ಶಂಕಿಸುತ್ತಿದ್ದ. ನವೆಂಬರ್ 19ರಂದು ಪತ್ನಿಯ ಹತ್ಯೆಗೆ ಪ್ಲಾನ್ ಮಾಡಿಕೊಂಡು ಆಕೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾನೆ.