ಬೆಂಗಳೂರು : ತನ್ನ ಹೆಂಡತಿಯೊಂದಿಗೆ ಫೋನ್ನಲ್ಲಿ ಹೆಚ್ಚಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಚಿಕ್ಕಪ್ಪನ ಮಗನಿಂದಲೇ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂದೀಪ್ ಕುಮಾರ್ ಕೊಲೆಯಾದ ವ್ಯಕ್ತಿಯಾದರೆ, ಆತನ ಚಿಕ್ಕಪ್ಪನ ಮಗ ಶುಬೋದ್ ಮಂಡಲ್ ಹತ್ಯೆ ನಡೆಸಿದ ಆರೋಪಿ. ಇಬ್ಬರು ಕೂಡಾ ಬಿಹಾರ ಮೂಲದವರು.ಸಂದೀಪ್ ಕೂಲಿ ಕೆಲಸಕ್ಕಾಗಿ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಚಿಕ್ಕಜಾಲದಲ್ಲಿ ರೂಂ ಮಾಡಿಕೊಂಡು ಸ್ನೇಹಿತರೊಂದಿಗೆ ವಾಸವಿದ್ದ. ಕಳೆದ 3 ತಿಂಗಳ ಹಿಂದಷ್ಟೇ