ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನೇ ಕೊಂದು, ಆತ್ಮಹತ್ಯೆ ಅಂತ ಬಿಂಬಿಸೋಕೆ ಹೋಗಿ ಕಂಬಿ ಎಣಿಸುವಂತಾಗಿದೆ.ಕುಡಿತದ ದಾಸನಾಗಿದ್ದ ರಮಣ (35) ಎಂಬಾತ ತಮ್ಮ ಸಹೋದರಿಯನ್ನೇ ಚಿನ್ನಾಭರಣ ಕೊಡಲಿಲ್ಲ ಅಂತ ಕೊಲೆ ಮಾಡಿದ್ದಾನೆ. ಸೀತಾಲಕ್ಷ್ಮೀ (40) ಕೊಲೆಯಾದವರು. ತೆಲಂಗಾಣ ಪ್ರದೇಶದ ಚಂದನಗರದಲ್ಲಿ ಈ ಘಟನೆ ನಡೆದಿದೆ.ಕೊಲೆಯಾಗಿರೋ ಮಹಿಳೆಯ ಚಿಕ್ಕಪ್ಪನ ಮಗನಾಗಿರೋ ರಮಣ ಎಂಬಾತ ಕುಡಿತದ ದಾಸನಾಗಿದ್ದನು. ಒಂಟಿಯಾಗಿದ್ದ ಸೀತಾಲಕ್ಷ್ಮೀ ಬಳಿ ಹಣ ಕೇಳಿದ್ದಾನೆ. ಆ ಬಳಿಕ ಚಿನ್ನದ ಆಭರಣಗಳನ್ನು ಕೇಳಿದ್ದಾನೆ. ಅವಳು