ಮೂರು ದಿನಗಳಿಂದ ಎಲ್ಲೂ ಹೋಗದೆ ಒಂದೇ ಜಾಗದಲ್ಲಿದ್ದ ಬೃಹತ್ ಕಾಳಿಂಗ ಸರ್ಪವನ್ನ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿರೋ ಘಟನೆ ನಡೆದಿದೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮರಕೋಡು ಗ್ರಾಮದಲ್ಲಿ ನಡೆದಿದೆ. ಮರಕೋಡುವಿನ ಅರುಣ್ ಎಂಬುವರ ಕಾಫಿ ತೋಟದಲ್ಲಿದ್ದ ಈ ಕಾಳಿಂಗನನ್ನ ಮೂರು ದಿನಗಳ ಹಿಂದೆಯೇ ಕೆಲಸಗಾರರೂ ನೋಡಿದ್ರು. ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ತೋಟದಲ್ಲಿ ಹತ್ತಾರು ಹಾವುಗಳನ್ನ ನೋಡಿರ್ತಾರೆ. ಆದ್ರೆ, ಹಾವುಗಳು ಒಂದೇ ಜಾಗದಲ್ಲಿ ಇರೋದಿಲ್ಲ ಎಂದು