ಬಿಎಸ್ವೈ ಇಲ್ಲಾಂದ್ರೆ ಬಿಜೆಪಿಯನ್ನು ನಾಯಿ ಮೂಸುವುದಿಲ್ಲ ಅಂತ ಕೆಜೆಪಿ ಸಂಸ್ಥಾಪಕ ಹೇಳಿದ್ಯಾಕೆ?

ತುಮಕೂರು, ಬುಧವಾರ, 5 ಡಿಸೆಂಬರ್ 2018 (20:51 IST)

ನವರ ಶಕ್ತಿ ನನಗೆ ಗೊತ್ತಿದೆ. ಅವರ ಜೊತೆ ಎರಡು ವರ್ಷ ನಾನು ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಇಲ್ಲಾ ಅಂದ್ರೆ ಬಿಜೆಪಿ ಪಕ್ಷವನ್ನ ನಾಯಿ ಸಹ ಮೂಸುವುದಿಲ್ಲ ಅಂತ ಕೆಜೆಪಿ ಪಕ್ಷ ವಿವಾದಿತ ಹೇಳಿಕೆ ನೀಡಿದ್ದಾರೆ.
 
ತುಮಕೂರಿನ ಪತ್ರಿಕಾಗೋಷ್ಠಿಯಲ್ಲಿ ಕೆಜೆಪಿ ಸಂಸ್ಥಾಪಕ ಪಧ್ಮನಾಭ ಪ್ರಸನ್ನ ಹೇಳಿಕೆ‌ ನೀಡಿದ್ದು, ಯಡಿಯೂರಪ್ಪ ನವರು ಹಾಕಿಕೊಟ್ಟ ದಾರಿಯಲ್ಲಿ ಸಂಘಟನೆ ಮಾಡಿದ್ದೀವಿ. ಕೆಜೆಪಿ ಪಕ್ಷ ಚೆನ್ನಾಗಿ ಪಿಕಪ್ ಆಗಿದೆ. ಯಡಿಯೂರಪ್ಪನವರ ವರ್ಚಸ್ಸಿನಿಂದಲೇ ಬಿಜೆಪಿ 104 ಸೀಟ್ ಪಡೆದುಕೊಂಡಿದೆ. ಉ- ಕ ಭಾಗ, ಹೈ -ಕ ಭಾಗ, ತುಮಕೂರು ಭಾಗದಲ್ಲಿ ಯಡಿಯೂರಪ್ಪನವರ ಹೆಸರಿನಿಂದಲೇ ಓಟ್ ಬೀಳ್ತಿರೋದು. ಯಡಿಯೂರಪ್ಪನವರು ಗೆದ್ದು ಸರ್ಕಾರ ರಚನೆ ಮಾಡಲಿಕ್ಕೆ ಬಂದರು. ಒಳಗೊಳಗೆ ಗುಂಪುಗಾರಿಕೆ ಆಗಿ ಸಿಎಂ ಆಗ್ತಾರೆ ಅಂತಾ ಪ್ರಯತ್ನ ಪಟ್ಟು ಅವರನ್ನ ತುಳಿದು ಮಟಾಶ್ ಮಾಡಲಿಕ್ಕೆ ಹೊರಟಿದ್ದಾರೆ ಎಂದು ದೂರಿದರು.

ಹೀಗೆ ಮುಂದುವರಿದ್ರೆ ಬಿಜೆಪಿ ಮುಂದೆ ಎಂಪಿ ಎಲೆಕ್ಷನ್ ನಲ್ಲಿ 10 ಸೀಟು ಕೂಡ ಗೆಲ್ಲಲಿಕ್ಕೆ ಆಗೋದಿಲ್ಲ. ಈಗಾಗಲೇ ಯಡಿಯೂರಪ್ಪ ಅಮಿತ್ ಷಾ ಗೆ ಲೆಟರ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಹತ್ತು ಕಡೆ ಸೋಲುತ್ತೆ ಇದನ್ನ ಸರಿಪಡಿಸಿ ಅಂತಾ. ಇಲ್ಲಿ ಗುಂಪುಗಾರಿಕೆ ಇದೆ ಅಂಥಾ ಲೆಟರ್ ಬರೆದಿದ್ದಾರೆ ಎಂದು ಯಡಿಯೂರಪ್ಪನ ಗುಣಗಾನ ಮಾಡಿದ ಕೆಜೆಪಿ ಪಧ್ಮನಾಭ ಪ್ರಸನ್ನ ಗಮನ ಸೆಳೆದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಂಎಲ್ ಸಿ ವಿರುದ್ಧ ಆಕ್ರೋಶ, ಪ್ರತಿಭಟನೆ

ಸಾಣೆಹಳ್ಳಿ ಶ್ರೀಗಳ ವಿರುದ್ಧ ಹೇಳಿಕೆ ನೀಡಿರುವ ಎಂಎಲ್ ಸಿ ರಘು ಆಚಾರ್ ವಿರುದ್ಧ ಪ್ರತಿಭಟನೆ ...

news

ಶ್ರೀ ಮಾ ದುರ್ಗಾ ದೇವಸ್ಥಾನಕ್ಕೆ ಕನ್ನ, ಲಕ್ಷ ಲಕ್ಷ ನಗದು, ಚಿನ್ನಾಭರಣ ಲೂಟಿ

ದೇವಾಲಯದಲ್ಲಿ ಚಿನ್ನಾಭರಣ ಹಾಗು ಹುಂಡಿಯಲ್ಲಿರುವ ಹಣ ದೋಚಿದ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.

news

ತಾಕತ್ ಇದ್ದರೆ ಶಾಸಕರನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಿ ಎಂದು ಕಾಂಗ್ರೆಸ್, ಜೆಡಿಎಸ್ ಗೆ ಸವಾಲೆಸೆದ ಶ್ರೀರಾಮುಲು

ಆಪರೇಷನ್ ಕಮಲ ವಿಚಾರ ಈಗ ಅಪ್ರಸ್ತುತವಾಗಿದೆ. ಪದೇ ಪದೇ ಯಾಕೆ ಇದನ್ನ ಇಟ್ಟುಕೊಂಡಿದ್ದಿರೋ ಅರ್ಥ ಆಗ್ತಾ ...

news

ಅಂತಾರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡ ಭೇಟಿ ನೀಡಿದ್ದೆಲ್ಲಿಗೆ ಗೊತ್ತಾ?

ಕೊಡಗು ಜಿಲ್ಲೆಯ ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಅಂತಾರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡದವರು ...