ಪ್ರಾದೇಶಿಕ ಭಾಷೆಯಾಗಿರುವ ಕೊಡವ ಭಾಷೆ ಕನ್ನಡದ ಸಹೋದರ ಭಾಷೆ ಇದ್ದಂತೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಕೊಡಗಿನಲ್ಲಿ ಸದ್ಯದಲ್ಲೇ ನಡೆಯಲಿರುವ ಕೊಡವ ಸಾಹಿತ್ಯ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ .ಟಿ . ರವಿ ಶುಭ ಕೋರಿದ್ದಾರೆ.ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಭಾಷೆಯಾದ ಕೊಡವ ಭಾಷೆ ಕನ್ನಡದ ಸಹೋದರ ಭಾಷೆ ಇದ್ದಂತೆ. ಕೊಡವ ಭಾಷೆಯಲ್ಲಿ ಅಪ್ಪಚ್ಚ ಕವಿಗಳು ಕನ್ನಡದ ಲಿಪಿ ಬಳಸಿಕೊಂಡು ಸಾಕಷ್ಟು ಸಾಹಿತ್ಯ ರಚನೆ ಮಾಡಿದ್ದಾರೆ. ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ.