ಹಣ್ಣುಗಳ ರಾಜ ಮಾವು… ಸದ್ಯ ಮಾವಿನ ಕಾಲ. ತರಹೇವಾರಿ ರುಚಿಯುಳ್ಳ ಮಾವು ಸವಿಯುವ ಸಮಯ. ಮ್ಯಾಂಗೋ ರುಚಿಗೆ ಮಾರುಹೋಗದವರೇ ಇಲ್ಲ. ಮಾವಿನ ತಿಂಡಿಗಳು, ಉಪ್ಪಿನಕಾಯಿ ಸೇರಿದಂತೆ ಮಾವಿನಿಂದ ತಯಾರಾಗುವ ಎಲ್ಲ ತಿನಿಸುಗಳು ಬಾಯಲ್ಲಿ ನೀರೂರಿಸುತ್ತವೆ. ಇದೀಗ ಕೊಪ್ಪಳ ಹೆಸರಲ್ಲೇ ಮಾವು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಕೊಪ್ಪಳ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರಾಟ ನಿಗಮ ಇವರ ಸಹಯೋಗದಲ್ಲಿ ನೈಸರ್ಗಿಕ ಮತ್ತು ವೈಜ್ಞಾನಿಕ ಮಾಗಿಸಿದ ಹಣ್ಣುಗಳಿಗೆ ಕೊಪ್ಪಳ ಮಾವು