ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರವರಿ 10 ರಿಂದ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿರುವ ಹಿನ್ನಲೆಯಲ್ಲಿ ಕೊಪ್ಪಳದ ಸರ್ಕ್ಯೂಟ್ ಹೌಸ್ ನವೀಕರಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ 25 ಲಕ್ಷ ಖರ್ಚು ಮಾಡುತ್ತಿರುವುದು ದೊಡ್ಡ ವಿಷಯವಲ್ಲ ಎಂದಿದ್ದಾರೆ. ಈ ಬಗ್ಗೆ ವರದಿ ಪ್ರಸಾರ ಮಾಡಿರುವ ಖಾಸಗಿ ವಾಹಿನಿ ಕೊಪ್ಪಳದ ಸರ್ಕ್ಯೂಟ್ ಹೌಸ್ ಇತ್ತೀಚೆಗಷ್ಟೇ ಉದ್ಘಾಟನೆಯಾಗಿದೆ. ಉದ್ಘಾಟನೆಯಾದ ಬಳಿಕ ಯಾವುದೇ ನಾಯಕರು ಇಲ್ಲಿ ತಂಗಿಲ್ಲ.