ದೇಶದಲ್ಲಿ ಕೊರೊನಾ ವೈರಸ್ ನಿಂದ ಮೊದಲ ಸಾವು ಕಂಡಿದ್ದ ಕಲಬುರಗಿಯಲ್ಲಿ ಇದೀಗ ಎರಡನೇ ವ್ಯಕ್ತಿ ಕೋವಿಡ್ – 19 ಗೆ ಬಲಿಯಾಗಿದ್ದಾನೆ. 65 ವರ್ಷದ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪುವುದರೊಂದಿಗೆ ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ ಎರಡನೇ ವ್ಯಕ್ತಿ ಬಲಿಯಾದಂತಾಗಿದೆ. ಅಲ್ಲದೇ ಮತ್ತೆ ಎರಡು ಹೊಸ ಪಾಸಿಟಿವ್ ಕೇಸ್ ಗಳು ದೃಢವಾಗಿವೆ. ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿ ಕೊರೊನಾ ದಿಂದಾಗಿ ಮೃತಪಟ್ಟಿದ್ದು, ಮೃತ ವ್ಯಕ್ತಿಗೆ ಹೇಗೆ ವೈರಸ್ ತಗುಲಿದೆ