ಹಣ್ಣು ಕೊಟ್ಟರೆ ತಿನ್ನದ ... ಗುಟ್ಕಾ ಕೊಟ್ಟರೆ ಬಿಡದ ಕೋತಿ ಪ್ರವಾಸಿಗರ ಹಾಗೂ ಗ್ರಾಮದ ಮನೆ ಮನೆಗಳಲ್ಲಿ ಈ ಕೋತಿಯ ಮಾತೆ ಮಾತು.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಗುಪ್ಪಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕೋತಿಯೊಂದು ನಿತ್ಯವೂ ಕಾಣಿಸಿಕೊಳ್ಳುತ್ತಿದ್ದು ಜನರೊಂದಿಗೆ ಬೆರೆಯುತ್ತಿದೆ. ಆದರೆ ಆರಂಭದಲ್ಲಿ ಹಣ್ಣು ಹಂಪಲು ತಿನ್ನುತ್ತಿದ್ದ ಈ ಕೋತಿಯ ರಂಪಾಟ ಸದ್ಯ ಹೆಚ್ಚಾಗಿದೆ. ಪ್ರಯಾಣಿಕರ ಜೇಬಿನಿಂದ ಗುಟ್ಕಾ ಚೀಟಿ ಎಗರಿಸುತ್ತಿದೆ.ಈ ಕೋತಿಯ ಗುಟ್ಕಾ ಚಟದಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಕೋತಿಯು