ಬೆಂಗಳೂರು : ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಏರುಗತಿ ಮುಂದುವರಿದಿದೆ.ಮಂಗಳವಾರ 348 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.2.11ಕ್ಕೆ ಜಿಗಿದಿದೆ. ತನ್ಮೂಲಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮೂರು ತಿಂಗಳ ನಂತರ ಮುನ್ನೂರರ ಗಡಿ ದಾಟಿದಂತಾಗಿದೆ.ಮೂರನೇ ಅಲೆ ನಿಸ್ತೇಜಗೊಳ್ಳುತ್ತ ಬಂದ ಅವಧಿಯಾದ ಮಾಚ್ರ್ 3ರಂದು 382 ಮಂದಿಯಲ್ಲಿ ಸೋಂಕು ಪತ್ತೆಯಾದ ಮೂರು ತಿಂಗಳ ಬಳಿಕ ಒಂದೇ ದಿನದ ಸೋಂಕು ಗರಿಷ್ಠ 350ರ ಸಂಖ್ಯೆ ಸಮೀಪಿಸಿದೆ. ಮಂಗಳವಾರ 311 ಮಂದಿ ಚೇತರಿಸಿಕೊಂಡಿದ್ದಾರೆ.ಕೋವಿಡ್ ಸಾವು