ರಾಜ್ಯದಲ್ಲಿ 4ನೇ ಕೋವಿಡ್ ಅಲೆ ಸದ್ಯಕ್ಕೆ ಬಂದಿಲ್ಲವಾದರೂ ಜನರು ನಿಯಮಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಜನತೆಗೆ ಮನವಿ ಮಾಡಿದರು. ಕೊವಿಡ್-19 ಹೋಗೇಬಿಟ್ಟಿದೆ ಎಂದು ಯಾರೊಬ್ಬರೂ ಭಾವಿಸಬೇಡಿ. ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ ಕೋವಿಡ್ ಇನ್ನು ನಮ್ಮನ್ನು ಬಿಟ್ಟು ಹೋಗಿಲ್ಲ. ಹಾಗಾಗಿ ಜನತೆ ಮಾಸ್ಕ್ ಧರಿಸುವುದು, ಲಸಿಕೆ ಹಾಕಿಸಿಕೊಳ್ಳುವುದು ಸೇರಿದಂತೆ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕೆಂದು ಸಲಹೆ ಮಾಡಿದರು. ಸುದ್ದಿಗಾರರ ಜೊತೆ