ಬಿಜೆಪಿಯ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಗರಂ ಆಗಿರುವ ಕಾಂಗ್ರೆಸ್ ಮುಖಂಡರು, ಬಿಜೆಪಿ ಮುಖಂಡನ ವಿರುದ್ಧ ಹರಿಹಾಯ್ದಿದ್ದಾರೆ.ಈಶ್ವರಪ್ಪರ ನಡೆಯನ್ನು ಟೀಕಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್. ಈಶ್ವರಪ್ಪ ತಮ್ಮ ಅಮಾನವೀಯ ಮುಖವನ್ನು ಹೊರಹಾಕಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿ ಮಾತ್ರ ಶಾಲೆಗೆ ಹೋಗುವ ಬಾಲಕಿಯೊಬ್ಬಳ ಬಗ್ಗೆ ಇಂಥ ಹೇಳಿಕೆ ಕೊಡಲು ಸಾಧ್ಯ ಎಂದರು.ಶಾಶ್ವತವಾಗಿ ಈಶ್ವರಪ್ಪನನ್ನು ಲಾಕ್ ಮಾಡಬೇಕು. ಟ್ವಿಟರ್ ನಲ್ಲಿ ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ ದಿನೇಶ್ ಗುಂಡೂರಾವ್. ನಿನ್ನೆ ಸಿದ್ದರಾಮಯ್ಯ ವಿರುದ್ಧ ಹೇಳಿಕೆಕೊಟ್ಟಿದ್ದರು