ಮನೆಗೆ ಅಂತ ಹೊರಟಿದ್ದ ವ್ಯಕ್ತಿಯೊಬ್ಬರು ಕೃಷ್ಣಾನದಿ ನೀರಿನ ಪಾಲಾಗಿರೋ ಘಟನೆ ನಡೆದಿದೆ.ಕೃಷ್ಣಾ ನದಿ ಪ್ರವಾಹ ಹೆಚ್ಚಾಗಿದ್ದು, ಮಳೆಯೂ ತನ್ನ ರೌದ್ರ ನರ್ತನ ಮುಂದುವರಿಸಿದೆ. ಇಂಥದ್ದರಲ್ಲಿ ನದಿನೀರಿಗೆ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.ರಾಯಬಾಗ ತಾಲೂಕಿನ ಗೂಂಡವಾಡ ಗ್ರಾಮದ ಬಳಿ ಘಟನೆ ನಡೆದಿದೆ.ಗೂಂಡವಾಡದಿಂದ ಕುಡಚಿ ಪಟ್ಟಣಕ್ಕೆ ಹೋಗುವಾಗ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ವ್ಯಕ್ತಿ.ಗುಂಡು ಅಪ್ಪಾಸಾಬ ಅಂಗಲಿ (33) ನೀರು ಪಾಲಾಗಿದ್ದಾರೆ. ರಾಯಬಾಗ ತಾಲೂಕಿನ ಗೂಂಡವಾಡ ನಿವಾಸಿಯಾಗಿರೋ ಗುಂಡು ತುಂಬಿ ಹರಿಯುತ್ತಿರುವ ಕೃಷ್ಣಾ ನದಿ ನೀರಿನ