ಬರೋಬ್ಬರಿ ಐದು ವರ್ಷಗಳ ಬಳಿಕ ಇದೀಗ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯ ಹಂತಕ್ಕೆ ತಲುಪಿದೆ. ಐದು ವರ್ಷಗಳಿಂದ ಸಮರ್ಪಕ ನೀರಿಲ್ಲದೇ ಬರದಿಂದ ಕಂಗೆಟ್ಟಿದ್ದ ಕಾವೇರಿ ಕೊಳ್ಳದ ರೈತರ ಮುಖದಲ್ಲೀಗ ಮಂದಹಾಸ ಮೂಡಿದೆ. ಜೀವನದಿ ಕಾವೇರಿಯ ಬೀಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೃಷ್ಣರಾಜ ಸಾಗರ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿ ಐದು ವರ್ಷವಾಗಿತ್ತು. 124.80 ಅಡಿ ನೀರು ಸಂಗ್ರಹದ ಸಾಮರ್ಥ್ಯವುಳ್ಳ ಅಣೆಕಟ್ಟೆ 2013ರಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ ಸಂಪೂರ್ಣ ಭರ್ತಿಯಾಗಿತ್ತು. ಆಗ