ಬೆಂಗಳೂರು: ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ಆಗಾಗ ಟೀಕಾ ಪ್ರಹಾರ ನಡೆಸುವುದು ಹೊಸತೇನಲ್ಲ. ಆದರೆ ಇದೀಗ ಇವರಿಬ್ಬರ ನಡುವೆ ಬುರುಡೆ ವಿಚಾರವಾಗಿ ಕೆಸರೆರಚಾಟ ನಡೆಯುತ್ತಿದೆ.ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಟೀಕೆ ಮಾಡುವಾಗ ಸಿಎಂ ಸಿದ್ದರಾಮಯ್ಯ ಕೊಲೆಯಾಗಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಈಶ್ವರಪ್ಪಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ ಈಶ್ವರಪ್ಪಗೆ ತಲೆ ಮತ್ತು ಮೆದುಳಿಗೆ ಕನೆಕ್ಷನ್ ತಪ್ಪಿ ಎಷ್ಟೋ ದಿನ ಆಗಿದೆ. ಅವರು ಮಾತಾಡುವುದಕ್ಕೆ ತಲೆಬುಡವಿಲ್ಲ