ಹೈಕಮಾಂಡ್ ಮಾತು ಮೀರದ ಈಶ್ವರಪ್ಪ, ನಿಮ್ಮ ಸಹವಾಸವೇ ಬೇಡ ಅಂದ್ರು!

ಬೆಂಗಳೂರು| Krishnaveni K| Last Modified ಶುಕ್ರವಾರ, 18 ಜೂನ್ 2021 (09:22 IST)
ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರವಾಗಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚನೆಯನ್ನು ನಾಯಕರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

 
ಅದರಲ್ಲೂ ಸಚಿವ ಯಾವುದೇ ಕಾರಣಕ್ಕೂ ಪತ್ರಕರ್ತರ ಮುಂದೆ ಬಾಯ್ಬಿಡದೇ ಇರಲು ತೀರ್ಮಾನಿಸಿದ್ದಾರೆ. ಹೀಗಾಗಿ ಮಾಧ್ಯಮಗಳು ತಮ್ಮನ್ನು ಪ್ರಶ್ನಿಸಲು ಮುಂದಾದಾಗ ‘ಬೇಡಪ್ಪಾ ನಿಮ್ಮ ಸಹವಾಸ. ನಾನೇನೂ ಹೇಳಲ್ಲ’ ಎಂದು ಜಾರಿಕೊಂಡಿದ್ದಾರೆ.
 
ರಾಜ್ಯದ ಸಮಸ್ಯೆ ನಿವಾರಿಸಲು ಅರುಣ್ ಸಿಂಗ್ ಬಂದಿದ್ದಾರೆ. ಅವರು ಎಲ್ಲರ ಸಮಸ್ಯೆಗಳನ್ನೂ ನಿವಾರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನೀವೇನೋ ಕೇಳೋದು, ನಾನೇನೋ ಹೇಳೋದು ಬೇಡ ಎಂದು ಈಶ್ವರಪ್ಪ ಮಾಧ್ಯಮಗಳಿಂದ ನುಣುಚಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :