Widgets Magazine

ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ತಿರುಗೇಟು

ಬೆಂಗಳೂರು| pavithra| Last Modified ಗುರುವಾರ, 10 ಅಕ್ಟೋಬರ್ 2019 (11:57 IST)
ಬೆಂಗಳೂರು : ಡಾ. ಜಿ ಪರಮೇಶ್ವರ್ ನಿವಾಸ, ಕಾಲೇಜು ಮೇಲೆ ಐಟಿ ದಾಳಿ ಬಗ್ಗೆ ನೀಡಿದ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ತಿರುಗೇಟು ನೀಡಿದ್ದಾರೆ.ಐಟಿ ದಾಳಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಲಾಗ್ತಿದೆ. ರಾಜಕೀಯ ದುರುದ್ದೇಶದಿಂದಲೇ ಹೀಗೆ ಮಾಡುತ್ತಿದ್ದಾರೆ, ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಬಿಜೆಪಿ ನಾಯಕರ ಮೇಲೆ ಯಾಕೆ ಐಟಿ ದಾಳಿ ಮಾಡಲ್ಲ? ಎಂದು ಕಿಡಿಕಾರಿದ್ದಾರೆ.

 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಈ ಹಿಂದೆ ಬಿಜೆಪಿ ನಾಯಕರ ಮೇಲೂ ಐಟಿ ದಾಳಿ ನಡೆದಿದೆ. ಆಗ ಕಾಂಗ್ರೆಸ್ ನವರು ಮಾಡಿಸಿದ್ರಾ? ಎಂದು ಪ್ರಶ್ನಿಸಿದ ಅವರು, ಐಟಿಗೆ ಒಂದು ಪಾವಿತ್ರ್ಯತೆ ಇದೆ. ಅದನ್ನ ಹಾಳು ಮಾಡಬಾರದು ಎಂದು ಹೇಳಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :