ಇಂದು ರಾಜ್ಯದಾದ್ಯಂತ ಶಕ್ತಿ ಯೋಜನೆಗೆ ಚಾಲನೆ ದೊರೆಯಲಿರುವ ಹಿನ್ನಲೆ KSRTC ಬಸ್ ನಿಲ್ದಾಣ ಸಿದ್ದಗೊಂಡಿದೆ.ಕೆ.ಎಸ್.ಆರ್.ಟಿ.ಸಿ ಟರ್ಮಿನಲ್ -2 ನಲ್ಲಿ ಉದ್ಘಾಟನೆಗೆ ಸಿಎಂ, ಡಿಸಿಎಂ, ಸಾರಿಗೆ ಸಚಿವರು ಆಗಮಿಸಲ್ಲಿದ್ದಾರೆ.KSRTC ನಿಲ್ದಾಣದಲ್ಲಿ ರಂಗೋಲಿ ಬಿಡಿಸಿ ಹಬ್ಬದ ವಾತಾವರಣವನ್ನ ಮಹಿಳೆಯರು ಸೃಷ್ಟಿಸಿದ್ದಾರೆ.ಅಲ್ಲದೇ BMTC ನಿಲ್ದಾಣಕ್ಕೂ ಸಿಎಂ ಆಗಮಿಸುವ ಸಾಧ್ಯತೆ ಹಿನ್ನಲೆ ವೇದಿಕೆಯನ್ನ BMTC ಅಧಿಕಾರಿಗಳು ಸಿದ್ದಪಡಿಸಿದ್ದಾರೆ.