ಸಚಿವ ಡಿ.ಕೆ.ಶಿವಕುಮಾರ ವಿರುದ್ಧ ಕೂಡಲಸಂಗಮ ಶ್ರೀ ಕಿಡಿ

ಬೀದರ್| Jagadeesh| Last Modified ಶುಕ್ರವಾರ, 19 ಅಕ್ಟೋಬರ್ 2018 (20:06 IST)
ಸಿದ್ದರಾಮಯ್ಯಗೆ ಆಗದ ಕೆಲವರು ಲಿಂಗಾಯತ ಧರ್ಮ ಸ್ವತಂತ್ರ ಧರ್ಮವನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ವಾಗ್ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ನಡೆದ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೂಡಲಸಂಗಮ ಶ್ರೀಗಳು, ಲಿಂಗಾಯತ
ಸ್ವತಂತ್ರ ಧರ್ಮಕ್ಕೆ ಮಾನ್ಯತೆಗೆ ಶಿಫಾರಸು ಮಾಡಿದ್ದು ಸರ್ಕಾರದಿಂದ ಅಪರಾಧವಾಗಿದೆ ಎಂದು ಹೇಳಿಕೆ ನೀಡಿದ ಸಚಿವ ಡಿ.ಕೆ .ಶಿವಕುಮಾರ್ ವಿರುದ್ಧ ಕಿಡಿ ಕಾರಿದರು.

ದಿನೇ ದಿನೇ ಸಿದ್ದರಾಮಯ್ಯನವರ ವರ್ಚಸ್ಸು, ಪ್ರಭಾವ ಹೆಚ್ಚಾಗುತ್ತಿದ್ದು, ಅವರಿಗೆ ಆಗದೆ ಇರುವ ಕೆಲವರು ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದರು.

ಡಿಕೆಶಿಗೆ ಲಿಂಗಾಯತರ ಬಗ್ಗೆ ಮಾಹಿತಿಯ ಕೊರತೆ ಇದ್ದು, ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯನವರು ಲಿಂಗಾಯತ ಸ್ವತಂತ್ರ
ಧರ್ಮಕ್ಕೆ ಶಿಫಾರಸು ಮಾಡಿದಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸೀಟು ಬಂದಿದ್ದು ವಿನಾಕಾರಣ ಚುನಾವಣೆ ಹಾಗೂ ಧರ್ಮವನ್ನು ಮೇಳಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು
ಮಾಜಿ ಸಿಎಂರನ್ನು ಹೊಗಳುತ್ತಾ, ಸಚಿವ ಡಿಕೆ ಶಿವಕುಮಾರ್
ವಿರುದ್ದ ಕೂಡಲಸಂಗಮ ಶ್ರೀಗಳು ವಾಗ್ದಾಳಿ ನಡೆಸಿದರು.


ಇದರಲ್ಲಿ ಇನ್ನಷ್ಟು ಓದಿ :