ಕಣ್ಣು ಕೋರೈಸೋ ಪ್ರವಾಸಿ ತಾಣಗಳಿಗೇನು ಕೊರತೆ ಇಲ್ಲ. ಹಿಡಿದ ದಾರಿಯಲ್ಲೆಲ್ಲಾ ಒಂದೊಂದು ಸುಮಧುರ ತಾಣಗಳು. ಅದ್ರಲ್ಲೂ ಮಲೆನಾಡಿನ ಸುತ್ತಮುತ್ತಲಿರೋ ಝರಿ, ಜಲಪಾತಗಳಂತೂ ನೋಡುಗನ ಮನಸ್ಸಿನ ಭಾವನೆಗಳಿಗೆ ಜೀವ ತುಂಬಲಿವೆ. ಅದೇ ರೀತಿ ಪ್ರವಾಸಿ ತಾಣಗಳ ಪಟ್ಟಿಗೆ ಸೇರೋ ಕುಮಾರಗಿರಿ ಪಾಲ್ಸ್ ಟ್ರಕ್ಕಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಚಿಕ್ಕಮಗಳೂರಿನಲ್ಲಿ ಕುಮಾರಗಿರಿ ಪಾಲ್ಸ್ ಕಣ್ಮನ ಸೆಳೆಯುತ್ತಿದೆ. ಕಲ್ಲುಬಂಡೆಗಳ ಮಧ್ಯೆಯಲ್ಲಿ ಹರಿಯುತ್ತಿರೋ ಜಲಪಾತ, ಪಾಲ್ಸ್ ಮುಂದೆ ನಿಂತು ಸೆಲ್ಫಿ ಕ್ಲಿಕಿಸುತ್ತಿರೋ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.ಚಿಕ್ಕಮಗಳೂರು