ಬೆಂಗಳೂರು : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ತಂದೆಯೇ ಪಿಎಂ ಸ್ಥಾನ ಬಿಟ್ಟ ಬಂದಿರುವಾಗ ಮಗನಾಗಿ ನಾನು ಸಿಎಂ ಸ್ಥಾನ ಬಿಡಲು ಹಿಂದೇಟು ಹಾಕ್ತೀನಾ ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಜನರಿಗೆ ಮೋಸ ಮಾಡಿ ನಾನು ಏನು ಸಾಧನೆ ಮಾಡಲಿ? ಸಿಎಂ ಸ್ಥಾನ ಬಿಡಲು ನನಗೆ ಕಷ್ಟ ಏನಿಲ್ಲ ಅಧಿಕಾರದಲ್ಲಿ