ಮಸ್ಕಿ ಉಪಚುನಾವಣೆ ಗೆಲ್ಲಲು ಬಿಜೆಪಿ ಮಾಡುತ್ತಿದ್ದ ತಂತ್ರದ ವಿರುದ್ಧ ಹೆಚ್.ಡಿ.ಕೆ ಆಕ್ರೋಶ

ಬೆಂಗಳೂರು| pavithra| Last Updated: ಸೋಮವಾರ, 22 ಮಾರ್ಚ್ 2021 (12:22 IST)
ಬೆಂಗಳೂರು : ಮಸ್ಕಿ ಉಪಚುನಾವಣೆ ಗೆಲ್ಲಲು ಬಿಜೆಪಿ ತಂತ್ರ ಮಾಡುತ್ತಿದ್ದ ಹಿನ್ನಲೆಯಲ್ಲಿ  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. ಜನರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಮಸ್ಕಿ ಅಭಿವೃದ್ಧಿಗೆ ಬಿಜೆಪಿಗೆ ವೋಟ್ ಹಾಕಿ ಅಂತಾರೆ. 2 ವರ್ಷದಿಂದ ಏಕೆ ಮಸ್ಕಿ ಅಭಿವೃದ್ಧಿ ಮಾಡಿಲ್ಲ? ಮಸ್ಕಿ ಅಭಿವೃದ್ಧಿ ಮಾಡದೇ ಏನು ಮಾಡ್ತಿದ್ರು? ಎಂದು ಪ್ರಶ್ನಿಸಿದ್ದಾರೆ.> > ಕೊರೊನಾ ವಿಚಾರದಲ್ಲಿ ಆಟವಾಡಬೇಡಿ. ನಿಮಗಿಷ್ಟ ಬಂದಂತೆ ಮಾರ್ಗಸೂಚಿ ಬದಲಿಸಬೇಡಿ. ರಾಜ್ಯದ ಜನತೆಯನ್ನು ಗೊಂದಲಕ್ಕೆ ದೂಡಬೇಡಿ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :