Widgets Magazine

ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕೈ ಪಡೆ ಗರಂ

ಬೆಂಗಳೂರು| Jagadeesh| Last Modified ಬುಧವಾರ, 29 ಜುಲೈ 2020 (22:46 IST)
ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ವಿರುದ್ಧ ಕಾಂಗ್ರೆಸ್ ನಾಯಕರು ಟೀಕಾಸ್ತ್ರ ಮುಂದುವರಿಸಿದ್ದು, ಭಾರೀ ಟಾಂಗ್ ನೀಡಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಶಾಸಕರ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿರುವ ಬೆನ್ನಲ್ಲೆ, ಕಾಂಗ್ರೆಸ್ ತಿರುಗೇಟು ನೀಡಿದೆ.

ಕುಮಾರಸ್ವಾಮಿಯವರ ನೈತಿಕತೆಯನ್ನೇ ಕೈ ಪಡೆ ಪ್ರಶ್ನೆ ಮಾಡಿದೆ.

ಕಾಂಗ್ರೆಸ್ ಜೊತೆ ಕೈ ಜೋಡಿಸಿ ಅಧಿಕಾರ ಅನುಭವಿಸುವಾಗ ಚೆನ್ನಾಗಿತ್ತು, ಈಗ ಕಾಂಗ್ರೆಸ್ ನಿಮಗೆ ಚೆನ್ನಾಗಿಲ್ಲವಾ? ಎಂದು ಪ್ರಶ್ನಿಸಿದೆ.


ಇದರಲ್ಲಿ ಇನ್ನಷ್ಟು ಓದಿ :