ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನ ಆರಂಭವಾಗಿ ನಾಲ್ಕು ದಿನ ಕಳೆದರೂ ಶಾಸಕರ ಗೈರು ಎದ್ದು ಕಾಣುತ್ತಿದೆ. ವಿಶೇಷವಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಒಮ್ಮೆ ಮಾತ್ರ ತಲೆ ತೋರಿಸಿದ್ದು ಬಿಟ್ಟರೆ, ಕಲಾಪಕ್ಕೆ ಹಾಜರಾಗಿಯೇ ಇಲ್ಲ. ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಚರ್ಚೆ, ಮೌಢ್ಯ ನಿಷೇಧ ವಿಧೇಯಕ, ಕಂಬಳಕ್ಕೆ ಕಾನೂನು ಮಾನ್ಯತೆ ಸೇರಿದಂತೆ ಪ್ರಮುಖ ವಿಷಯಗಳು ಚರ್ಚೆಯಾಗುತ್ತಿರಬೇಕಾದರೆ ಜೆಡಿಎಸ್ ಪಕ್ಷದ ನಾಯಕನೇ ಕಲಾಪದಲ್ಲಿ ಪಾಲ್ಗೊಂಡಿಲ್ಲ.ಜೆಡಿಎಸ್