ಅಮೇರಿಕಾದಿಂದಲೇ ರಾಜ್ಯ ರಾಜಕೀಯ ನೋಡ್ತಿದ್ದೇನೆ ಎಂದ ಕುಮಾರಸ್ವಾಮಿ

ಬೆಂಗಳೂರು, ಸೋಮವಾರ, 1 ಜುಲೈ 2019 (15:50 IST)

ಶಾಸಕ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ಸಿಎಂ ಕುಮಾರಸ್ವಾಮಿ ವಿದೇಶದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ಆನಂದ್ ಸಿಂಗ್ ಅವರು ಕಂಪ್ಲಿ ಶಾಸಕ ಗಣೇಶ್ ಜತೆಗಿನ ಜಗಳ ಹಾಗೂ ಜಿಂದಾಲ್ ಗೆ ಭೂಮಿ ನೀಡಿರುವ ವಿಷಯದಲ್ಲಿ ಮನನೊಂದು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಶಾಸಕ ಸಿಂಗ್, ರಾಜೀನಾಮೆ ವಿಷಯಕ್ಕೆ ಸಂಬಂಧಿದಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅಮೇರಿಕಾ ಪ್ರವಾಸದಲ್ಲಿದ್ದರೂ ಎಲ್ಲವನ್ನೂ ಗಮನಿಸುತ್ತಿದ್ದಾರೆ.

ರಾಜ್ಯದ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ನಿರಂತರ ಹಗಲುಗನಸು ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

ಈ ನಡುವೆ ಮೈತ್ರಿ ಸರಕಾರ ಪತನವಾದರೆ ಸರಕಾರ ರಚನೆಗೆ ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಗೆ ಕೈ ಕೊಡುತ್ತಾರಾ ಏಳು ಶಾಸಕರು?

ಮೈತ್ರಿ ಸರಕಾರಕ್ಕೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿ ಶಾಕ್ ನೀಡಿದ್ದಾರೆ. ಇದರ ಬೆನ್ನಲ್ಲೆ ಅತೃಪ್ತ ...

news

ಸರಕಾರ ಬೀಳಿಸೋ ಯತ್ನ: ನಾವೇನು ಸನ್ಯಾಸಿಗಳಲ್ಲ ಅಂತಂದ ಯಡಿಯೂರಪ್ಪ

ರಾಜ್ಯದಲ್ಲಿ ಸರಕಾರ ರಚನೆ ಮಾಡುವ ಅವಕಾಶ ಸಿಕ್ಕರೆ ಅದಕ್ಕೆ ಬಿಜೆಪಿ ಸಿದ್ಧವಿದೆ. ನಾವೇನೂ ಸನ್ಯಾಸಿಗಳಲ್ಲ. ...

news

ಬಿಜೆಪಿ 'ಆಪರೇಷನ್ ಕಮಲ'ಕ್ಕೆ ಕೈ ಹಾಕಿದರೆ ನಾವೂ ರಿವರ್ಸ್ ಆಪರೇಷನ್ ಮಾಡುತ್ತೇವೆ- ಸಚಿವ ಸತೀಶ್ ಜಾರಕಿಹೊಳಿ ಎಚ್ಚರಿಕೆ

ಬೆಂಗಳೂರು : ಕಾಂಗ್ರೆಸ್ ಶಾಸಕ ಆನಂದ್ ಸಿಂಗ್, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಮೈತ್ರಿ ...

news

ಶಾಸಕರ ರಾಜೀನಾಮೆಯ ಹಿಂದಿನ ಮಾಸ್ಟರ್ ಮೈಂಡ್ ನಾನಲ್ಲ- ಹೆಚ್.ವಿಶ್ವನಾಥ್ ಸ್ಪಷ್ಟನೆ

ಕೋಲ್ಕತ್ತಾ: ಜೆಡಿಎಸ್ ನ ಶಾಸಕರು ರಾಜೀನಾಮೆ ಕೊಡ್ತಾರೆಂಬ ಸುದ್ದಿಯಿದ್ದು, ಇದರ ಹಿಂದಿನ ಮಾಸ್ಟರ್ ಮೈಂಡ್ ...