ಸಿಎಂ ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದವರೆಂದು ಹೇಳ್ತಾರೆ. ಆದರೆ, 50 ಲಕ್ಷ ರೂ ಮೌಲ್ಯದ ಶೂ ಧರಿಸುತ್ತಾರೆ. ಇದು ಢೋಂಗಿ ಸಮಾಜವಾದ ಅಲ್ಲವೇ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರಕಾರ ಚೆಕ್ಪೋಸ್ಟ್ಗಳಲ್ಲಿ ಖಾಸಗಿ ಗೂಂಡಾಗಳನ್ನು ನೇಮಿಸಿ ಹಣ ಲೂಟಿ ಹೊಡೆಯುತ್ತಿದೆ. ಪ್ರತಿನಿತ್ಯ 20 ರಿಂದ 30 ಲಕ್ಷ ಹಣ ಸಂಗ್ರಹಿಸಲಾಗುತ್ತಿದೆ. ಜಿಎಸ್ಟಿ ಜಾರಿ ಬಂದ ಮೇಲೆ ಚೆಕ್ಪೋಸ್ಟ್ಗಳನ್ನು ಮುಚ್ಚಬೇಕು ಎಂದು