ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಂದೆ ಅವರೊಂದಿಗೆ ನಡೆಸಿದ ಫೋನ್ ಕಾಲ ಸಂಭಾಷಣೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಯತೀಂದ್ರ ಸಿದ್ದರಾಮಯ್ಯ ಅವರ ಸಂಭಾಷಣೆ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದು, ವರ್ಗಾವಣೆ ದಂಧೆಗೆ ಈ ವಿಡಿಯೋನೆ ಸಾಕ್ಷಿ ಎಂಬಂತೆ ಆರೋಪ ಮಾಡಿದವು. ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವೈಎಸ್ಟಿ ಟ್ಯಾಕ್ಸ್ ಅಂತ ಆರೋಪಿಸಿದ್ದರು.