ಬೆಂಗಳೂರು: ಇದುವರೆಗೆ ನಮ್ಮ ಸ್ವಂತ ಬಲದಲ್ಲೇ ಅಧಿಕಾರ ರಚಿಸುತ್ತೇವೆ ಎನ್ನುತ್ತಿದ್ದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಇದೀಗ ಉಲ್ಟಾ ಹೊಡೆದಿದ್ದಾರೆ.ಜೆಡಿಎಸ್ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡರೆ ಕುಟುಂಬದಿಂದಲೇ ಹೊರ ಹಾಕಬೇಕಾಗುತ್ತದೆ ಎಂದು ಕುಮಾರಸ್ವಾಮಿಗೆ ದೇವೇಗೌಡರು ಎಚ್ಚರಿಕೆ ನೀಡಿದರೂ, ಮಾಜಿ ಸಿಎಂ ಮೈತ್ರಿಗೆ ಎರಡೂ ಪಕ್ಷಗಳಿಗೆ ಬಾಗಿಲು ತೆರೆದಿದ್ದಾರೆ.ಚುನಾವಣಾ ಸಮೀಕ್ಷೆಗಳು ಜೆಡಿಎಸ್ 40 ಸ್ಥಾನ ಗೆಲ್ಲಬಹುದು ಎನ್ನುತ್ತಿದೆ. ಹೀಗಾಗಿ ನಮ್ಮನ್ನು ಬಿಟ್ಟು ಯಾವ ಪಕ್ಷವೂ ಸರ್ಕಾರ ರಚಿಸಲು ಆಗಲ್ಲ. ಹಾಗಾಗಿ